ಪೋಸ್ಟ್‌ಗಳು

ಪ್ರೀತಿ ಮೋಸ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಯಾಕೆ ಪ್ರೀತಿ ಕಡಿಮೆ ಆಗುತ್ತದೆ?

  ಯಾಕೆ ಪ್ರೀತಿ ಕಡಿಮೆ ಆಗುತ್ತದೆ? (ನನ್ನ Counseling ಅನುಭವದಲ್ಲಿ ಕಂಡ ನಿಜವಾದ ಕಾರಣಗಳು) “ಸರ್, ಮೊದಲಿನಂತೆ feel ಆಗ್ತಿಲ್ಲ…” Counseling session ನಲ್ಲಿ ಈ ಮಾತು ನಾನು ಹಲವಾರು ಬಾರಿ ಕೇಳಿದ್ದೇನೆ. ಹೆಂಡತಿ ಹೇಳುತ್ತಾಳೆ. ಕೆಲವೊಮ್ಮೆ ಗಂಡ ಹೇಳುತ್ತಾನೆ. ಕೆಲವೊಮ್ಮೆ ಇಬ್ಬರೂ silent ಆಗಿರುತ್ತಾರೆ… ಆದರೆ ಮನಸ್ಸಿನೊಳಗೆ ಅದೇ ಪ್ರಶ್ನೆ. ಪ್ರೀತಿ ಒಂದು ದಿನದಲ್ಲಿ ಶುರುವಾಗುವುದಿಲ್ಲ. ಆದರೆ ಕಡಿಮೆಯಾಗುತ್ತಿರುವ ಅನುಭವ ಒಂದು ದಿನ ಅಚಾನಕ್ ತಟ್ಟುತ್ತದೆ. ನನ್ನ counseling ಅನುಭವದಲ್ಲಿ ಒಂದು ದೊಡ್ಡ ಸತ್ಯ ಏನೆಂದರೆ — ಪ್ರೀತಿ ಕಡಿಮೆಯಾಗುವುದಿಲ್ಲ… ಗಮನ ಮತ್ತು ಕಾಳಜಿ ಕಡಿಮೆಯಾಗುತ್ತದೆ. 1️⃣ Effort Habit ಆಗಿಬಿಡುತ್ತದೆ ಒಮ್ಮೆ counseling ಗೆ ಬಂದ ಒಂದು ದಂಪತಿ. ಮದುವೆಗೆ 6 ವರ್ಷ. ಹೆಂಡತಿ ಹೇಳಿದ ಮಾತು: “ಅವರು ಈಗ call ಮಾಡೋದಿಲ್ಲ, surprise ಕೊಡೋದಿಲ್ಲ.” ಗಂಡ ಹೇಳಿದ ಮಾತು: “ಮದುವೆಯಾದ್ಮೇಲೆ ಇವೆಲ್ಲ normal ಅಲ್ಲವಾ?” ಇಲ್ಲಿ problem love ಅಲ್ಲ. Effort “special” ಇಂದ “routine” ಆಗಿಬಿಟ್ಟಿತ್ತು. Relationship ನಲ್ಲಿ ನಾವು ಆರಂಭದಲ್ಲಿ extra care ಕೊಡುತ್ತೇವೆ. ಆದರೆ time ಹೋಗುತ್ತಾ, “ಅವರು ಇದ್ದಾರೆ” ಅನ್ನೋ guarantee feeling ಬರುತ್ತದೆ. Guarantee ಬಂದ ಜಾಗದಲ್ಲಿ appreciation ಕಡಿಮೆಯಾಗುತ್ತದೆ. 2️⃣ Communication Slow Poison ಹೆಚ್ಚಿನ couples problem ಏನು ಗ...