ಮೋಸ ಮಾಡುವ ವ್ಯಕ್ತಿ ಮುಚ್ಚಿಡೋ ವಿಚಾರಗಳು (Counseling ದೃಷ್ಟಿಯಿಂದ)
ಮೋಸ ಮಾಡುವ ವ್ಯಕ್ತಿ ಮುಚ್ಚಿಡೋ ವಿಚಾರಗಳು (Counseling ದೃಷ್ಟಿಯಿಂದ)
ಕೌನ್ಸೆಲಿಂಗ್‌ಗೆ ಬರುವ ಅನೇಕ ಜನರ ಕಣ್ಣಲ್ಲಿ ಒಂದೇ ಪ್ರಶ್ನೆ ಇರುತ್ತದೆ…
“ಅವರು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾರಾ… ಅಥವಾ ನಾನು ಮೋಸವಾಗ್ತಿದ್ದೀನಾ?”
ಸಂಬಂಧದಲ್ಲಿ ನೋವು ಬರುತ್ತದೆ ಅಂದ್ರೆ ಅದು ಮಾತಿನಿಂದ ಅಲ್ಲ, ಮಚ್ಚಿಟ್ಟ ಸತ್ಯಗಳಿಂದ.
ಒಬ್ಬ ವ್ಯಕ್ತಿ ಮೋಸ ಮಾಡ್ತಿದ್ದರೆ ಅವರು ಸಾಮಾನ್ಯವಾಗಿ ಕೆಲವು ವಿಚಾರಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ.
1. ಮೊಬೈಲ್‌ನಲ್ಲಿ ಏಕಾಏಕಿ ಸೀಕ್ರೆಟ್
ಹಿಂದೆ ನಿಮ್ಮ ಮುಂದೆ phone use ಮಾಡ್ತಿದ್ದವರು ಏಕಾಏಕಿ
screen hide ಮಾಡೋದು, password change ಮಾಡೋದು, chat delete ಮಾಡೋದು…
ಇವುಗಳು ಕೆಲವೊಮ್ಮೆ ಒಳಗೆ ಏನೋ ನಡೆಯುತ್ತಿದೆ ಅನ್ನೋದರ ಸೂಚನೆ ಆಗಬಹುದು.
2. ಸಮಯದ ಬಗ್ಗೆ ಸ್ಪಷ್ಟತೆ ಇರೋದಿಲ್ಲ
“Busy ಇದ್ದೆ”, “work ಇತ್ತು”, “friends ಜೊತೆ ಇದ್ದೆ”
ಎಂದು ಹೇಳುತ್ತಾರೆ… ಆದರೆ ವಿವರ ಕೇಳಿದಾಗ ಸ್ಪಷ್ಟ ಉತ್ತರ ಕೊಡೋದಿಲ್ಲ.
ಕೌನ್ಸೆಲಿಂಗ್‌ನಲ್ಲಿ ನಾವು ನೋಡುವ ಸಾಮಾನ್ಯ ಲಕ್ಷಣ ಇದು.
3. ಸಣ್ಣ ಸುಳ್ಳುಗಳಿಂದ ಆರಂಭ
ಯಾವುದೇ ದೊಡ್ಡ ಮೋಸ ಒಂದೇ ದಿನದಲ್ಲಿ ಶುರುವಾಗೋದಿಲ್ಲ.
ಅದು ಸಣ್ಣ ಸುಳ್ಳುಗಳಿಂದ ಆರಂಭವಾಗುತ್ತದೆ.
ಆ ಸಣ್ಣ ಸುಳ್ಳುಗಳು ನಿಧಾನವಾಗಿ ದೊಡ್ಡ ರಹಸ್ಯಗಳಾಗಿ ಮಾರ್ಪಡುತ್ತವೆ.
4. ನಿಮ್ಮ ಪ್ರಶ್ನೆಯನ್ನು ತಪ್ಪಿಸುವುದು
ನೀವು ನೇರವಾಗಿ ಕೇಳಿದಾಗ…
ಅವರು ವಿಷಯ ಬದಲಾಯಿಸುವುದು, ಕೋಪಗೊಳ್ಳುವುದು, ಅಥವಾ silence ಆಗುವುದು.
ಇದು ಬಹಳ ಬಾರಿ guilt ಇರುವ ವ್ಯಕ್ತಿಗಳ ವರ್ತನೆ.
5. ನಿಮ್ಮನ್ನೇ ತಪ್ಪುಗಾರನಂತೆ ತೋರಿಸುವುದು
ಕೆಲವರು ತಮ್ಮ ತಪ್ಪನ್ನು ಮಚ್ಚಿಡಲು ಒಂದು ವಿಧಾನ ಬಳಸುತ್ತಾರೆ…
“ನೀನು ತುಂಬ doubt ಮಾಡ್ತಿಯಾ”
“ನಿನ್ನ mind negative ಆಗಿದೆ”
ಅಂತ ಹೇಳಿ ನಿಮ್ಮನ್ನೇ guilt feel ಆಗುವಂತೆ ಮಾಡುತ್ತಾರೆ.
6. ಏಕಾಏಕಿ ದೂರವಾಗುವುದು
ಹಿಂದೆ ನಿಮ್ಮ ಜೊತೆ ಮಾತನಾಡಲು ಸಮಯ ಕೊಡುತ್ತಿದ್ದವರು…
ಈಗ ಮಾತಾಡೋ ಆಸಕ್ತಿ ಕಡಿಮೆ ಆಗುತ್ತದೆ.
ಇದು ಕೆಲವೊಮ್ಮೆ ಮನಸ್ಸು ಬೇರೆ ಕಡೆ ಹೋಗಿರುವ ಲಕ್ಷಣ ಆಗಬಹುದು.
Counseling truth
ಒಂದು ವಿಷಯ ಯಾವಾಗಲೂ ನೆನಪಿಟ್ಟುಕೊಳ್ಳಿ…
ಸಂಬಂಧದಲ್ಲಿ ಅನುಮಾನ ಬಂದಾಗ ತಕ್ಷಣ ತೀರ್ಪು ಕೊಡಬೇಡಿ.
ಮೊದಲು ಮಾತನಾಡಿ, ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಆದರೆ ಒಂದು ಸತ್ಯ ಇದೆ…
ನಿಜವಾದ ಪ್ರೀತಿ ಇರುವ ಜಾಗದಲ್ಲಿ
ಮಚ್ಚಿಟ್ಟ ಸತ್ಯಗಳು ಹೆಚ್ಚು ಇರುವುದಿಲ್ಲ.
ಈ ವಿಚಾರ ಇಷ್ಟ ಆದ್ರೆ ಎಲ್ರಿಗೂ ಶೇರ್ ಮಾಡಿ
counseling ಬೇಕಾಗಿದ್ದಲ್ಲಿ-8050125244

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ