💔 “ನೀನಿಲ್ಲದೆ ನಾನು ಬದುಕೋದೇ ಇಲ್ಲ” – ಈ ಮಾತಿನ ಹಿಂದೆ ಇರುವ ಕಠಿಣ ಸತ್ಯ
💔 “ನೀನಿಲ್ಲದೆ ನಾನು ಬದುಕೋದೇ ಇಲ್ಲ” – ಈ ಮಾತಿನ ಹಿಂದೆ ಇರುವ ಕಠಿಣ ಸತ್ಯ “ನೀನಿಲ್ಲದೆ ನಾನು ಬದುಕಲ್ಲ…” ಈ ಮಾತು ಕೇಳಿದಾಗ ಪ್ರೀತಿಯ ಆಳ ಗೊತ್ತಾಗುತ್ತೆ ಅನ್ನಿಸುತ್ತದೆ. ಆದರೆ ನನ್ನ ಅನುಭವ ಏನು ಹೇಳುತ್ತೆ ಗೊತ್ತಾ? ನಾನು counseling ನಲ್ಲಿ ಎಷ್ಟೋ ಜನರನ್ನು ನೋಡಿದ್ದೀನಿ. ಅವರು ಆಗಿನ ಕ್ಷಣಕ್ಕೆ ನಂಬಿಸುತ್ತಾರೆ — “ನೀ ಇಲ್ಲದ್ರೆ ನಾನು ಸಾಯ್ತೀನಿ” ಅಂತ. ಆದರೆ… ಅವಶ್ಯಕತೆ ಮುಗಿದ ಮೇಲೆ? ಭಾವನೆ ತಣ್ಣಗಾದ ಮೇಲೆ? ಪರಿಸ್ಥಿತಿ ಬದಲಾಗಿದ ಮೇಲೆ? ಅದೇ ಜನ ಹೊರಟು ಹೋಗುತ್ತಾರೆ. 🎭 ಕ್ಷಣದ ಭಾವನೆ vs ಜೀವನದ ಸತ್ಯ ನಾನು 100ಕ್ಕೂ ಹೆಚ್ಚು ಕತೆಗಳನ್ನು ಕೇಳಿದ್ದೀನಿ. ಪ್ರತಿ ಕಥೆಯಲ್ಲೂ ಒಂದೇ dialogue: “ಅವರು ನನ್ನಿಲ್ಲದೆ ಇರಲ್ಲ ಸರ್…” ಆದ್ರೆ ಕೆಲವು ತಿಂಗಳ ನಂತರ ಅವರೇ ಹೇಳ್ತಾರೆ — “ಸರ್, ಅವರು move on ಆಗಿಬಿಟ್ಟರು.” ಆಗ ಗೊತ್ತಾಗುತ್ತೆ — ಕ್ಷಣದ ಭಾವನೆ ಶಾಶ್ವತ ಸತ್ಯ ಅಲ್ಲ. ⚰️ ಜೀವನದ ದೊಡ್ಡ reality ಎಷ್ಟೋ ಜನ ನಮ್ಮ ಜೀವನದಲ್ಲಿ ಸತ್ತು ಹೋಗಿದ್ದಾರೆ. ನಮಗೆ ತುಂಬಾ ಹತ್ತಿರ ಇದ್ದವರು ಕೂಡ. ಆದರೆ ಸತ್ಯ ಏನು? ಸತ್ತ ವ್ಯಕ್ತಿಯ ಹಿಂದೆ ಯಾರೂ ಸಾಯಲಿಲ್ಲ. ಆಗಿನ ಕ್ಷಣಕ್ಕೆ ಕಣ್ಣೀರು ಬರುತ್ತದೆ. ಮನಸ್ಸು ಒಡೆದು ಹೋಗುತ್ತದೆ. ಆದರೆ ಜೀವನ ನಿಲ್ಲುವುದಿಲ್ಲ. ಕೆಲವು ದಿನಗಳಲ್ಲಿ ನಾವು ಮತ್ತೆ ಕೆಲಸಕ್ಕೆ ಹೋಗುತ್ತೇವೆ. ಮತ್ತೆ ನಗುತ್ತೇವೆ. ಮತ್ತೆ ಬದುಕುತ್ತೇವೆ. ಇದೇ ಜೀವನದ ಸತ್ಯ. 💡 ಹಾಗಿದ್ರೆ “ನೀನಿಲ್ಲದೆ ಬದುಕ...