ನೀವು ಪ್ರೀತ್ಸೋರು ಸಮಯ ಕೊಡತಿಲ್ಲ ಯಾಕೆ ಗೊತ್ತಾ?



ನೀವು ಪ್ರೀತ್ಸೋರು ಸಮಯ ಕೊಡತಿಲ್ಲ ಯಾಕೆ ಗೊತ್ತಾ?



ಒಬ್ಬರು “ನಿನ್ನನ್ನ ತುಂಬಾ ಪ್ರೀತಿಸ್ತೀನಿ” ಅಂತ ಹೇಳ್ತಾರೆ…

ಆದ್ರೆ ಅದೇ ವ್ಯಕ್ತಿ ನಿಮಗೆ ಸಮಯ ಮಾತ್ರ ಕೊಡ್ತಿಲ್ಲ ಅಂದ್ರೆ, ಅಲ್ಲಿ ಏನೋ ತಪ್ಪು ಶುರುವಾಗಿರುತ್ತೆ.


ಪ್ರೀತಿ ಅನ್ನೋದು ಮಾತಿನಲ್ಲಿ ಅಲ್ಲ…

ಸಮಯದಲ್ಲಿ ತೋರುತ್ತದೆ.


ಪ್ರೀತಿ ಮಾಡ್ತಿದೀನಿ ಅನ್ನೋದರ ಇನ್ನೊಂದು ಅರ್ಥ, ಸಮಯ ಕೊಡ್ತೀವಿ ಅನ್ನೋದು,Counseling ಅಲ್ಲಿ ಎಷ್ಟೋ ಜನ ನನ್ನ ಹತ್ರ ಹೇಳೋದು ಇದೊಂದೆ ಸರ್ ಮೊದಲಿನ ಹಾಗೆ ಸಮಯ ಕೊಡ್ತಿಲ್ಲ ಅನ್ನೋದೇ ಇರುತ್ತೆ, ಯಾಕೆ ಸಮಯ ಸರ್ ಅಂತಾರೆ, ಅದಕ್ಕೆ ನಾನು ಹೇಳೋದು ನೀವು ಅತಿಯಾಗಿ ಅವರಿಗೆ Priority ಕೊಟ್ಟು, ಅವರ ಹಿಂದೆ ಅತಿಯಾಗಿ ಬಿದ್ದಾಗ, Selfrespect ಬಿಟ್ಟು ಇರಬೇಡಿ, and ನಿಮ್ಗೆ ಸಮಯ ಕೊಡದೆ ಇರೋದಕ್ಕೆ ಇದೆ ಕಾರಣ 


ಬೇರೆ ಅವರು ಲೈಫ್ ಅಲ್ಲಿ ಬಂದಿದ್ದಾರೆ ಅಂತಾ ಅರ್ಥ 



1️⃣ ಆದ್ಯತೆ (Priority) ಬದಲಾಗಿದೆಯಾ?



ಯಾರಿಗಾದರೂ ನಾವು ಮುಖ್ಯವಾದರೆ, ಅವರು ಎಷ್ಟು busy ಇದ್ದರೂ

ಒಂದು 5 ನಿಮಿಷ ಕರೆ ಮಾಡ್ತಾರೆ.

ಒಂದು ಮೆಸೇಜ್ ಕಳುಹಿಸ್ತಾರೆ.


“Busy” ಅನ್ನೋ ಪದ ಬಹಳ ಬಾರಿ

ನಿಮಗೆ ಸಮಯ ಕೊಡಬಾರದೆಂದು ತೆಗೆದುಕೊಂಡ ನಿರ್ಧಾರ ಆಗಿರಬಹುದು.





2️⃣ ನೀವು ಮಾತ್ರ ಪ್ರಯತ್ನ ಮಾಡ್ತಿದೀರಾ?



Relationship ಅಂದ್ರೆ ಇಬ್ಬರೂ ಹಿಡಿದು ನಡಿಸೋ ದಾರಿ.

ಒಬ್ಬರು ಮಾತ್ರ ಕರೆ, ಮೆಸೇಜ್, ಭೇಟಿ—all efforts ಮಾಡ್ತಿದ್ರೆ

ಅದು ಪ್ರೀತಿ ಅಲ್ಲ… ಅದು ಅಭ್ಯಾಸ (habit) ಆಗಿರಬಹುದು.


ನೀವು ಕೇಳದೇ ಇದ್ದರೆ ಅವರು ನೆನಪಿಸಿಕೊಳ್ಳೋದಿಲ್ಲ ಅಂದ್ರೆ,

ಅದು ಪ್ರೀತಿಯಲ್ಲ, ಅದು ಅವಶ್ಯಕತೆ.





3️⃣ ಹೊಸ ಆದ್ಯತೆ / ಹೊಸ ವ್ಯಕ್ತಿ



ಕಹಿ ಸತ್ಯ ಏನೆಂದರೆ…

ಸಮಯ ಕಡಿಮೆಯಾಗೋದು ಕೆಲವೊಮ್ಮೆ

ಹೊಸ ಆಸಕ್ತಿ ಅಥವಾ ಹೊಸ ವ್ಯಕ್ತಿ ಬಂದಾಗ.


ಮೊದಲು ನಿಮ್ಮ ಜೊತೆ 1 ಗಂಟೆ ಮಾತಾಡ್ತಿದ್ದವರು,

ಈಗ 5 ನಿಮಿಷಕ್ಕೂ ಸಮಯ ಕೊಡಲ್ಲ ಅಂದ್ರೆ

ಅವರ ಮನಸ್ಸು ಬೇರೆಡೆ ಹೋಗಿರಬಹುದು.





4️⃣ ನಿಮ್ಮ ಮೌಲ್ಯ ಕಡಿಮೆಯಾಗ್ತಿದೆಯಾ?



ಅತಿಯಾಗಿ ಲಭ್ಯವಾಗಿದ್ದರೆ (always available)

ಕೆಲವರು ನಮ್ಮ ಮೌಲ್ಯ ಕಡಿಮೆ ಮಾಡ್ತಾರೆ.


ಎಲ್ಲಾಗ್ಲೂ ನೀವು ಮೊದಲು ಕರೆ ಮಾಡಿದ್ರೆ,

ಎಲ್ಲಾಗ್ಲೂ ನೀವು adjust ಮಾಡಿದ್ರೆ,

ಒಮ್ಮೆ ಅವರು ಪ್ರಯತ್ನ ಮಾಡ್ತಾರಾ ಅಂತ ನೋಡಿ.


ಸ್ವಾಭಿಮಾನ ಕಳೆದುಕೊಂಡ ಪ್ರೀತಿ,

ಕೊನೆಯಲ್ಲಿ ನೋವನ್ನೇ ಕೊಡುತ್ತದೆ.





5️⃣ ಪ್ರೀತಿ ಇದೆ… ಆದರೆ ಪರಿಪಕ್ವತೆ ಇಲ್ಲ



ಕೆಲವರು ನಿಜವಾಗಿಯೂ ಪ್ರೀತಿಸ್ತಾರೆ.

ಆದ್ರೆ relationship maintain ಮಾಡೋ maturity ಇರಲ್ಲ.


Time management, responsibility, emotional balance ಇಲ್ಲ ಅಂದ್ರೆ

ಅವರು ನಿಮ್ಮನ್ನು ಪ್ರೀತಿಸ್ತಾ ಇದ್ದರೂ

ನಿಮಗೆ ಸಮಯ ಕೊಡಲು ಆಗೋದಿಲ್ಲ.





ಅಂತಿಮ ಸತ್ಯ



ಪ್ರೀತಿ ಇದ್ದರೆ ಸಮಯ ಸಿಗುತ್ತದೆ.

ಸಮಯ ಸಿಗ್ತಿಲ್ಲ ಅಂದ್ರೆ…

ನೀವು ಅವರ ಜೀವನದಲ್ಲಿ ಮೊದಲ ಸ್ಥಾನದಲ್ಲಿಲ್ಲ ಅನ್ನೋದು ಬಹಳ ಸಾಧ್ಯತೆ.


ಯಾರನ್ನಾದರೂ ಬೆನ್ನಟ್ಟೋದಕ್ಕಿಂತ

ನಿಮ್ಮ ಮೌಲ್ಯ ಹೆಚ್ಚಿಸಿಕೊಳ್ಳಿ.


ನಿಮಗೆ ಸಮಯ ಕೊಡದ ವ್ಯಕ್ತಿಗಿಂತ

ನಿಮ್ಮ ಸಮಯಕ್ಕೆ ಮೌಲ್ಯ ಕೊಡುವ ವ್ಯಕ್ತಿ ಮುಖ್ಯ.



Counseling ಬೇಕಾಗಿದ್ದಲ್ಲಿ -8050125244



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಡನ್ನಾಗಿ ಪ್ರೀತಿ ಕಡಿಮೆ ಆಗೋದಕ್ಕೆ ನಿಜವಾದ ಕಾರಣ ಇಲ್ಲಿದೆ

ಅತಿಯಾದ ಪ್ರೀತಿ ಕೂಡ ಅಪಾಯ – Relationship ನಲ್ಲಿ ಈ ತಪ್ಪು ಮಾಡಬೇಡಿ

💔 “ನಿನ್ನನ್ನು ಕಳೆದುಕೊಂಡದ್ದು ಅವಳ ತಪ್ಪಲ್ಲ… ನೀನು ನಿನ್ನನ್ನೇ ಕಳೆದುಕೊಂಡದ್ದೇ ದೊಡ್ಡ ತಪ್ಪು!”